Thursday, 22 December 2016

ಇದೊಂಥರ ಭಯ

                ಮೊನ್ನೆ ನಮ್ಮ ಮನೆಗೆ ನನ್ನ ಸ್ವಲ್ಪ ದೂರದ ಸಂಬಂಧಿಕರು ಮದುವೆಗೆ ಕರೆಯೋಲೆ ಕೊಡಲು ಬಂದಿದ್ದರು. ಮೂರು ಜನರು ಲಗ್ನ ಪತ್ರಿಕೆ ಹಂಚಲು ಹೋಗಬಾರದೆಂಬ ನಂಬಿಕೆಯಿಂದ  ನಾಲ್ಕು  ಜನರಿದ್ದ ಈ ಟೀಮು ನಮ್ಮ ಮನೆಗೂ ಬಂದಿದ್ದರು.  ಮೂರು ಹೆಂಗಸರು ಮತ್ತು ಒಬ್ಬ ಗಂಡಸು ಅಥವಾ ಮೂವರು ಹೆಂಗಸರನ್ನು ತನ್ನ ಕಾರಿನಲ್ಲಿ ಈ ಗಂಡಸು ಡ್ರೈವ್ ಮಾಡಿಕೊಂಡು ಬಂದಿದ್ದ. ಅವರ ಹೆಸರು ಅವರ ಹೆಸರು  ಹೇಳುವ ಅವಶ್ಯಕತೆಯಿಲ್ಲ ಬಿಡಿ.


          ಅವರಲ್ಲಿದ್ದ  ಒಬ್ಬ ಹೆಂಗಸು ಮಾತ್ರ ಬಹಳ ಸ್ವಾರಸ್ಯಕರವಾಗಿ ಮಾತನಾಡುತ್ತಿದ್ದರು. ಮಕ್ಕಳು, ನೆಂಟರು , ಇತ್ಯಾದಿ ಇಷಯಗಳ ಉಭಯ ಕುಶಲೋಪರಿಗಳನ್ನು ಮಾತನಾಡುತ್ತ, ಆಗಿ ಪ್ರತಿಯೊಂದು ವಿಷಯಕ್ಕೂ ' ಅದಕ್ಕೆ ನಂಗೆ ಒಂಥರಾ ಭಯ ' ಎಂದು ಪದೇ ಪದೇ ಹೇಳುತ್ತಿದ್ದರು.  ನಿಮಗೆ ಅರ್ಥವಾಗಲಿಲ್ಲ ಅಂತ ಕಾಣುತ್ತೆ. ಸ್ಪಷ್ಟ್ವವಾಗಿ ಹೇಳೇಬಿಡ್ತೀನಿ, ಬಿಡಿ . ' ಯಾರೇ ಗಟ್ಟಿಯಾಗಿ ಮಾತನಾಡಲಿ ನನಗೆ ಒಂಥರಾ ಭಯ '  ಎಂದು ಪ್ರಾರಂಭವಾದದ್ದು  ಜ್ಞಾಪಕ.'  ಆಮೇಲೆ ಮನೆಗೆ ಮಕ್ಕಳು ಸಮಯಕ್ಕ ಮನೆಗೆ ಬರಲಿಲ್ಲ ಎಂದರೆ ಇದೊಂಥರ ಭಯ ಶುರುವಾಗುತ್ತೆ ' . ' ಟಿವಿಯಲ್ಲಿ ಕೆಳಭಾಗದಲ್ಲಿ ಅಪಘಾತ , ಸಾವು ...ಹೀಗೆ ಸಾಲುಗಳು ಬರುತ್ತಿದ್ದರೆ , ನಮ್ಮ ಯಜಮಾನರು ಮನೆಗೆ ಇನ್ನು ಬರದಿದ್ದರೆ ಇದೊಂಥರಾ ಭಯ ಆಗುತ್ತೆ ', ' ಈ ಪರೀಕ್ಷೆಗಳನ್ನು ಬರೆದು  ಇಂಜಿನಿಯರ್ ಸೀಟು ಸಿಗುತ್ತಾ ಅನ್ನೋದು ಇನ್ನೊಂಥರ ಭಯ ", ' ಯಜಮಾನರು ನಾನು ಮಾಡಿದ ಅಡುಗೆ ಸ್ವಲ್ಪ ಹೆಚ್ಚು ಕಡಿಮೆಯಾಗಿ ಊಟ ಮಾಡದೇಯಿರೋದೇ  ಇನ್ನೊಂಥರ ಭಯ '. ಇತ್ಯಾದಿ ಥರಾ ಥರಾ ಭಯದ  ವಾತಾವರಣ ಪರಿಚಯಿಸುತ್ತಿದ್ದರು.


          ನನಗೆ ಅನುಮಾನ . ಭಯ ಎಂದರೆ ಅದರಲ್ಲಿಯೂ ಪಂಗಡಗಳು, ವಿಧಗಳು ಇತ್ಯಾದಿ ಇದೆಯಾ ಎಂದು. ಇದೆ ಎಂದರೆ ಇದೊಂಥರಾ ಭಯ ಶುರುವಾಯ್ತು.

No comments:

Post a Comment