Saturday 23 November 2019

ದೊಡ್ಡವರು!


ದೊಡ್ಡವರು!
ದೊಡ್ಡವರು ಎಂದರೇನು ಎನ್ನುವುದೇ ಬಹಲ್ ಕುತೂಹಲಕಾರಿ ವಿಚಾರ.  ವಯಸ್ಸಿನಲ್ಲಿ    ದೊಡ್ಡವರು , ಹಿರಿಯರು ಎಂಬುದೇನೋ  ಸರಿ. ದೊಡ್ಡವರಾದರು , ದೊಡ್ಡವರಾಗಿದ್ದಾರೆ ಎಂಬುದು  ಸನ್ನಿವೇಶ, ಸಂಧರ್ಬದ ಮೇಲೆ ಅವಲಂಬಿತವಾಗಿರುತ್ತದೆ.
ಗ್ರಾಮೀಣ ಪ್ರದೇಶದಲ್ಲಿ ಸಾಮಾನ್ಯವಾಗಿ ಹೆಣ್ಣು ಮಕ್ಕಳನ್ನು  ದೊಡ್ಡವಳಾಗಿದ್ದಾಳೆ  ಎಂಬುದು  ಕಿಶೋರಿಯ ಮೊದಲನೆಯ ಋತುಚಕ್ರ ಶುರುವಾದಾಗ ಅಥವಾ ಮೈನೆರೆದಾಗ. ಸಮಯದಲ್ಲಿ ಅವಳ  ಮನೆಯಲ್ಲಿ ಸಂಪ್ರದಾಯ , ಸಂಸ್ಕಾರಪೂರ್ಣವಾಗಿ ಮನೆಯಲ್ಲಿ  ವಿಜ್ರಂಭಣೆಯಿಂದ ಅಚ್ಚರಿಸುತ್ತಾರೆ. ವಿಪರ್ಯಾಸವೆಂದರೆ ಗಂಡು ಹುಡುಗ ಮನೆಯ ಮಟ್ಟಿಗೆ ರೀತಿ ದೊಡ್ಡವನಾಗುವುದೇಯಿಲ್ಲ. ಯಾವುದೇ  ಆಚರಣೆಯು ಇಲ್ಲ ,  ವಯಸ್ಸಾದಂತೆ ಅವನಿಗೆ ಮಾಡುವೆ ಮಾಡುತ್ತಾರೆ.
   ಇದಲ್ಲದೆ ಯಾವ ವ್ಯಕ್ತಿಯನ್ನು ದೊಡ್ಡವರೂ ಎನ್ನುತ್ತೇವೆ? ಏಕೆಂದರೆ ಹಲವು ಅರ್ಥಗಳೇ ಇವೆ.ದೊಡ್ಡವರು ಎಂದರೆ ವಯಸ್ಸಿನವರು ಇಲ್ಲವೇ ಶ್ರೀಮಂತರು ಆಗಿರಬೇಕು ಎನ್ನುವುದೇನು ಇಲ್ಲ. ಕೆಲವೊಮ್ಮೆ  ಲೋಕಾರೂಡಿಯಾಗಿ,
ಮೊದಲು ಸರಿಯಾಗಿ ಮಾತನಾಡುತ್ತಿದ್ದವರು ಈಗ ಸರಿಯಾಗಿ ಮಾತನಾಡಲಿಲ್ಲ ಎಂದರೆ ದೊಡ್ಡವನು ಎಂದರ್ಥ
ನಿಮ್ಮ  ಸಂಭಂದಿಕರೊ , ಸ್ನೇಹಿತರೋ  ನಿಮ್ಮನ್ನು ನಿರ್ಲಕ್ಷಿಸಿ ಮಾತಾನಾಡಿಸದೆ ಹೋದರೆ - ದೊಡ್ಡವನು ಎಂದರ್ಥ.
ಸಭೆಯಲ್ಲಿ ಯಾರನ್ನಾದರೂ ಅತಿಥಿಯೋ , ಅಧ್ಯಕ್ಷರೋ , ಸನ್ಮಾನಿತರೊ  ಆದರೆ  ದೊಡ್ಡವರು ಎಂದರ್ಥ.
ಯಾವುದೇ ಪ್ರಶಸ್ತಿ , ಸನ್ಮಾನ  ಬಂದರೆ ದೊಡ್ಡವರು ಎಂದರ್ಥ.
ನೀವು ಕುಳಿತಿರುವ ಆಸನವನ್ನು ಬೇರೆಯವರಿಗೆ ಬಿಟ್ಟುಕೊಟ್ಟಾಗ  ಅವರೋ ಇಲ್ಲವೇ ನೀವೋ ದೊಡ್ಡವರು ಎಂದರ್ಥ.
ನೀವಾಗಿ ನೀವೇ ಇತರರನ್ನು ( ಸ್ನೇಹಿತರೋ, ನೆಂಟರೋ) ಉಭಯ ಕುಶಲೋಪರಿ ವಿಚಾರಿಸದೆ  ಇದ್ದಾಗ  ದೊಡ್ಡವರು ಎಂದರ್ಥ.
ನೀವು ಆರ್ಥಿಕವಾಗಿ  ಬಲವಾಗಿದ್ದರೆ, ಮಾಲೀಕನಾಗಿದ್ದರೆ, ಬಲಿಷ್ಠವಾಗಿದ್ದರೆ   ದೊಡ್ಡವರು ಎಂದರ್ಥ.
ಬಹಳ ಬೆಲೆ ಬಾಳುವ ಆಭರಣ, ವಸ್ತ್ರ, ಕಾರು, ಬಂಗಲೆ, ಇತ್ಯಾದಿ  ಇದ್ದವರು ದೊಡ್ಡವರು ಎಂದರ್ಥ.  
ಬಹಳ ಕಡಿಮೆ ವಸ್ತ್ರ , ಸರಳವಾಗಿರುವವರು , ಮೌನವಾಗಿರುವವರು  ದೊಡ್ಡವರು ಎಂದರ್ಥ.
ಹೆಚ್ಚು ಜನರು ಸೇರಿ ಯಾರಿಗಾದರೂ  ಗೌರವ ತೋರಿಸುತ್ತಿದ್ದರೆ  ಅವರು ದೊಡ್ಡವರು ಎಂದರ್ಥ.
ಹೀನಾಯವಾಗಿ ಮಾತನಾಡುವುದು,  ಅವಮಾನ ಮಾಡುವುದು ,ಕೆಟ್ಟ  ಬೈಗುಳ ಗಳನ್ನೂ  ಮಾಡುವನು ಕೂಡ ಕೆಲವೊಮ್ಮೆ ದೊಡ್ಡವನು  ಎಂದರ್ಥ.
ನಿಜಾಂಶವೆಂದರೆ  ದೊಡ್ಡವರು ಎನಿಸಿಕೊಳ್ಳುವುದು ನಿಷ್ಕಲ್ಮಶ ಪ್ರೀತಿ ತೋರಿಸುವುದರಿಂದ , ವಿಚಾರವಂತರಾಗುವುದರಿಂದ,   ಎಲ್ಲರಿಗೂ ಒಳ್ಳೆಯದನ್ನೇ ಬಯಸುವುದರಿಂದ , ಮಾತುಗಳಿಂದ, ಯಾರನ್ನು ದ್ವೇಷಿಸದೆಯಿರುವುದರಿಂದ  ಮತ್ತು ಶಾಂತಿಯುತ ಹೃದಯವಂತರಿರುವುದರಿಂದ.
ಇದು ಯಾವ ವಯಸ್ಸಿನವರು, ಯಾರಾದರು , ಯಾವ ಧರ್ಮದವರಾದರು ಆಗಿರಬಹುದು.

No comments:

Post a Comment