Monday 18 November 2019

ಅಪ್ಪನೋ! ಅಮ್ಮನೋ !


ಅಪ್ಪನೋ!   ಅಮ್ಮನೋ !
ನಮ್ಮ ಸಮಾಜದಲ್ಲಿ ಸ್ಥಿತಿಗತಿಗಳು ಬದಲಾವಣೆಯಾಗುತ್ತಿವೆ. ಆರ್ಥಿಕತೆ ಕೇಳೇವರಲ್ಲಿ ಉತ್ತಮಸ್ಥಿತಿ ತಲುಪಿದರೂ  ವಿದ್ಯೆ ಹಾಗೂ ಉದ್ಯೋಗದಲ್ಲಿ ಸಾಧನೆ ಮಾಡಿದರೂ, ಗಂಡು  ಮತ್ತು ಹೆಣ್ಣಿನ ತಾರತಮ್ಯ ಕಡಿಮೆಯಾಗುತ್ತಿದ್ದಂತೆ, ದೈಹಿಕ , ಲೈಂಗಿಕ , ಮಾನಿಸಿಕ ಸ್ಥಿತಿಗಳೂ ಕೂಡ ಯುಕರಲ್ಲಿ ಅದರಲ್ಲೂ ಇಂದಿನ ಪೀಳಿಗೆಯವರಲ್ಲಿ ಬದಲಾವಣೆ ಅನಿವಾರ್ಯವಾಗುತ್ತಿದೆ. ಇದು ಸಮಾಜದ   ಉದ್ಧಾರವೋ  ಅಥವಾ ನಾಗರಿಕತೆಯ  ಬೆಳವಣಿಗೆಯ  ಹಂತವೋ ತಿಳಿಯಲು ಅಸಾಧ್ಯ.

ಒಂದೆಡೆ ಸಲಿಂಗ ವಿವಾಹಗಳು ನೆರವೇರಿ, ಸಲಿಂಗ ದಂಪತಿಗಳು ಮಗುವನ್ನು ಆಶಿಸಿ , ಪಡೆಯುವ  ಸಂದರ್ಭಗಳು ಹೆಚ್ಚಾಗುತ್ತಿದೆ. ಮಗುವನ್ನು ದತ್ತು  ಸ್ವೀಕರಿಸದೆ ತಾನೇ ತಂದೆಯೋ , ತಾಯಿಯೋ  ಆಗುವ ಇಚ್ಚಯಿದ್ದು ಮಗುವನ್ನು ಬಾಡಿಗೆ ತಾಯಂದಿರ ಮೂಲಕ ಪಡೆದಿರುವ ಉಧಾಹರಣೆಗಳು ಕಾಣಬರುತ್ತಿವೆ. ಅದೇ ರೀತಿ ಮಗುವನ್ನು ಏಕ ವ್ಯಕ್ತಿಯು ಪಡೆಯಲು ಇಚ್ಚಿಸಿ ಮದುವೆಯ ಹೊರತಾಗಿ, ಯಾವುದೇ ಸಂಬಂಧವಿಲ್ಲದೆ, ಏಕ ವ್ಯಕ್ತಿಯೇ ತಾಯಿತಂದೆಯಾಗಿ ಪಾಲನೆ ಮಾಡುತ್ತಿರುವ ಉಧಾಹರಣೆಗಳು ವಿರಳವೇನಲ್ಲ.
ವಾಸ್ತವಿಕವಾಗಿ ಮಗುವು  ಬೆಳವಣಿಗೆಯಾಗುತ್ತಿದಂತೆ   ತಂದೆತಾಯಿಯನ್ನು ಗುರುತಿಸಿ ಕರೆಯುವುದು ವಾಡಿಕೆ. ಆದರೆ ಸಲಿಂಗ ದಂಪತಿಗಳಲ್ಲಿ ಬೆಳೆಯುತ್ತಿರುವ ಮಗುವಿನಲ್ಲಿ ಕ್ರಮೇಣ ತನ್ನ ತಂದೆ , ತಾಯಿ ಇವರಲ್ಲಿ ಯಾರು ? ವೈರನ್ನು ಅಪ್ಪ, ಅಮ್ಮ, ಎಂದು ಕರೆಯುವುದು ಎನ್ನುವ ಗೊಂದಲಲ್ಲಿ ಸಿಕ್ಕಿಹಾಕಿಕೊಳ್ಳುವುದು ಖಂಡಿತ. ಗೊಂದಲ ಶಾಲೆಗೇ ಹೋದ  ಕೆಲವು ವರ್ಷಗಳ ನಂತರ ಕಂಡುಬರಬಹುದು. ತನ್ನ ಸ್ನೇಹಿತರ ಗುಂಪಿನಲ್ಲಿ ಹುರುತಿಸುವ ತಂದೆ ತಾಯಿ ಗಳು ಹೆಣ್ಣು ಗಂಡುಗಳಾಗಿದ್ದು , ತನಗೆ ಸಲಿಂಗ ದಂಪತಿಗಳೇ ಪಾಲಕರಾಗಿರುವುದರಿಂದ ಅಪ್ಪನೋ , ಅಮ್ಮನೋ ಗೊಂದಲ ಸೃಷ್ಟಿಸಿ ಯಾಕೆ ಹೀಗಾಯಿತು ಎನ್ನುವ ಪ್ರಶ್ನೆ ಬೆಳೆದು, ದೊಡ್ಡವನಾಗಿ ಸಮಾಜವನ್ನು ಅರ್ಥ ಮಾಡಿಕೊಳ್ಳುವವರೆಗೂ ಇದ್ದೇಯಿರುತ್ತದೆ.  ಯಾವ ರೀತಿ ಕೌನ್ಸೆಲಿಂಗ್ ಅಥವಾ ಮನೋಪಚಾರಕ್ಕೆ ಬಳಸುವ ಸಾಧನಗಳು ಉಪಯೋಗವಾಗುವುದಿಲ್ಲ
ಸಲಿಂಗ ದಂಪತಿಗಳಲ್ಲಿ ಅಪ್ಪ , ಅಮ್ಮ ಯಾರು  ಎಂದು ನಿರ್ಧರಿಸಿದ  ಮಾತ್ರಕ್ಕೆ ಬೆಳೆದ ಮಗುವು , ಇದು ಸಮಾಜದ ವಿರುದ್ಧವಿದೆ ಎಂದು ಅರ್ಥಮಾಡಿಕೊಳ್ಳಲು ಕಷ್ಟವೇನಾಗುವುದಿಲ್ಲ. ದಂಪತಿಗಳು ಗುರುತಿಸಬಹುದಾದ ಅಪ್ಪ, ಅಮ್ಮನ ಸಂಭಂದವನ್ನು ಬೆಳೆದು ದೊಡ್ಡವರಾದ  ಹಾಗೆ ಮಗುವ ಒಪ್ಪಿಕೊಳ್ಳುವುದು ಕಷ್ಟವೇ ಸರಿ.
ಅದೇ ರೀತಿ ತಾವು ಮಕ್ಕಳನ್ನು ಹಡೆದಿದ್ದೇವೆ ಎನ್ನುವ  ತೃಪ್ತಿಗೋಸ್ಕರ ( ಮೂದಿ  ವಯಸ್ಸಿನಲ್ಲಿ)  ಹಿರಿಯ ನಾಗರಿಕರು ತಂದೆತಾಯಿಯಾಗುತ್ತಿರುವುದು ಅಪರೂಪವೇನಲ್ಲ. ಆದರೆ ಸಲಿಂಗ ದಂಪತಿಗಳ ಪಾಲಕರಿಗೂ , ಹಿರಿಯ ವಯಸ್ಸಿನಲ್ಲಿ ತಂದೆತಾಯಿಯಾಗುವುದಕ್ಕೂ ಬಹಳ ವ್ಯತ್ಯಾಸ ಸಮಾಜದಲ್ಲಿ ಕಂಡುಬರುತ್ತದೆ.

No comments:

Post a Comment